
ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು
ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು. ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು. ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ…