
ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್
ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ…