
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ
ಬೆಂಗಳೂರಿನ ರಂಗ ಭೂಮಿಯಲ್ಲಿ ನಿರಂತರವಾಗಿ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರ ರಾವ್ ರವರು ನನಗೆ ಪರಿಚಿತರೇನಲ್ಲ. ಒಂದು ತಿಂಗಳ ಹಿಂದೆ, ನಾನು ಮಾಯಸಂದ್ರದ ನಟರಾದ ಟಿ. ನಾಗರಾಜ್ ರವರ ಬಗ್ಗೆ ಬರೆದಿರುವ ಕಲಾ ಪರಿಚಯದ ಲೇಖನವನ್ನು ಓದಿ ಅವರು ಮೆಚ್ಚುಗೆಯ ಮಾತನಾಡಿದರು. ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳುಹಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದೆ. ಅದಕ್ಕಾಗಿ, ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು…