
ಟೆಡೆಕ್ಸ್, ಟೆಡ್‌ಟಾಕ್ ಮಾದರಿಯಲ್ಲಿ ಭಾರತದ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮ ಮಹಾನ್ ಕಿಡ್ಸ್ ಶಾಲೆಯಲ್ಲಿ: ನೇತ್ರಾಜ್ ಗುರುವಿನಮಠ
ಗಂಗಾವತಿ: ಫೆಬ್ರವರಿ-15 ಶನಿವಾರ ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಮಹಾನ್ ಕಿಡ್ ಟಾಕ್ಸ್ ಎನ್ನುವ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಇದು ಭಾರತದಲ್ಲಿ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮವಾಗಿದೆ ಎಂದು ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನಮಠ ಪ್ರಕಟಣೆಯಲ್ಲಿ ತಿಳಿಸಿದರು. ಶಾಲೆಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಪ್ರತಿ ಶನಿವಾರ ೨೦ ಮಕ್ಕಳಿಗೆ ಈ ವೇದಿಕೆಯನ್ನು ನೀಡಲಾಗುತ್ತಿದ್ದು, ಮಕ್ಕಳು ಮಾತನಾಡುವ ಮೊದಲು ವಿಷಯವನ್ನು ತಿಳಿದುಕೊಳ್ಳಬೇಕು. ವಿಷಯವನ್ನು ತಿಳಿದುಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು. ಈ…