ನವೆಂಬರ್-೮ ರಂದು ಗಂಗಾವತಿಯಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ
ಗಂಗಾವತಿ: ನಗರದ ಶ್ರೀ ಮಾತಾ ಕರೋಕೆ ಸ್ಟುಡಿಯೋ ಹಾಗೂ ಸಪ್ತಸ್ವರ ಸಾಂಸ್ಕೃತಿಕ ಕಲಾ ಬಳಗ ಇವರಿಂದ ನವೆಂಬರ್-೮ ಶನಿವಾರ ಸಂಜೆ ೫:೩೦ಕ್ಕೆ ಗಂಗಾವತಿಯ ಕೋರ್ಟ್ ಮುಂಭಾಗದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ನಗರಸಭೆ ಸದಸ್ಯರಾದ ಆರ್. ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯೋಧ್ಯಮಿಗಳಾದ ಶಿವಪ್ಪ ಗಾಳಿ ವಹಿಸಲಿದ್ದು, ಡಿ.ವೈ.ಎಸ್.ಪಿ ಆದ ಜಯಪ್ಪ…
