ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಬೆಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟರು. ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ “ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ಪತ್ರಕರ್ತರಿಗೆ ಮಾಧ್ಯಮಶ್ರೀ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಸ್ವಾತಂತ್ರ‍್ಯಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ನಂತರ ಅಭಿವೃದ್ಧಿಯಾದ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ…

Read More
ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಗಂಗಾವತಿ: ಅದ್ವೈತ ಸಿದ್ದಾಂತದ ತಳಹದಿಯ ಮೇಲೆ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ಪೀಠಗಳಲ್ಲಿ ಪ್ರಥಮ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶೃಂಗೇರಿ ಶಾರದಾ ಪೀಠ ತನ್ನದೇ ಆದ ಗುರು ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೀಠವು ಸನಾತನ ಧರ್ಮದ ರಕ್ಷಣೆ ಹಾಗೂ ದೇಶದ ಸುಭಿಕ್ಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು. ಅವರು ಮಂಗಳವಾರ ಶಾರದಾ ದೇವಸ್ಥಾನದಲ್ಲಿ ಜಗದ್ಗುರು ಶ್ರೀಶ್ರೀ ವಿದುಶೇಖರ ಮಹಾಸ್ವಾಮಿಗಳವರ ೩೩ನೆಯ ವರ್ಧಂತಿ…

Read More
ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ

ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ

ವಿದುಶೇಖರ ಮಹಾಸ್ವಾಮಿಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು. ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ. 2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ…

Read More
ಮನಸೆಳೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಮನಸೆಳೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಘಟಕ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಯಿತು. ಈ ಕಾರ್ಯಕ್ರಮ ಭಾನುವಾರ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು, ಮತ್ತು ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ ಲಂಬಾಣಿ, ಸಂಘದ ಉದ್ದೇಶಗಳನ್ನು ವಿವರಿಸಿದರು. ಸಂಘವು ಪ್ರತೀ ಭಾನುವಾರ ಆನ್‌ಲೈನ್‌ನಲ್ಲಿ ವಿವಿಧ ಹಾಡುಗಳ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾನ್ವಿತರಿಗೆ ವೇದಿಕೆ ಒದಗಿಸುತ್ತಿದೆ. ಈ ಸ್ಪರ್ಧೆಗಳ ಪ್ರಥಮ ಹಂತದಲ್ಲಿ ೩೪…

Read More
ಪತ್ರಕರ್ತ ಹೆಚ್. ಮಲ್ಲಿಕಾರ್ಜುನ ರವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ

ಪತ್ರಕರ್ತ ಹೆಚ್. ಮಲ್ಲಿಕಾರ್ಜುನ ರವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ

ಗಂಗಾವತಿ: ಹಿರಿಯ ಪತ್ರಕರ್ತರು ಹಾಗೂ ಕಲ್ಯಾಣಸಿರಿ ಪತ್ರಿಕೆಯ ಸಂಪಾದಕರಾದ ಹೊಸಕೇರಾ ಮಲ್ಲಿಕಾರ್ಜುನರವರು ಮಾಧ್ಯಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದ್ದು, ಜುಲೈ-೩೧ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಸಂಘದ ಉದ್ಘಾಟನೆ ಜೊತೆಗೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಕರ್ತರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.   ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಂ.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

Read More
ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಗಂಗಾವತಿ: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜುಲೈ-29 ಮಂಗಳವಾರ, ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು ಉತ್ಸವ ನಡೆಯಲಿದೆ. ಬೆಳಗ್ಗೆ 9 ಘಂಟೆಗೆ ಗುರುಗಳ ಪಾದುಕೆಗಳಿಗೆ ಅಭೀಷೇಕ, ಶಂಕರ ಅಷ್ಟೋತ್ತರ ಪಾರಾಯಣ ಸೇರಿದಂತೆ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಸಂಜೆ: 5.30ರಿಂದ ಭಜನೆ, ಆರತಿ ಹಾಗೂ ಮಹಾಮಂಗಳಾರತಿ ಜರುಗಲಿವೆ

Read More
ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಗಂಗಾವತಿ: ಜುಲೈ 31 ರಂದು ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ (ರಿ) ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು. ಈ ಸಂಘವನ್ನು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವೂ ಜರುಗಲಿದೆ. ಅದೇ ದಿನ ಸಂಘದ ವೆಬ್‌ಸೈಟ್ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಗಂಗಾವತಿಯ ಹೆಚ್ಚಿನ ಪತ್ರಕರ್ತರು ಭಾಗವಹಿಸಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜುಲೈ 17ರಂದು ನಡೆಯಿತು. ನಗರದ…

Read More
ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು. ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು. ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ…

Read More
ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ. ಆಯ್ಕೆಯಾದ ಕಲಾವಿದರು ಇಂತಿವೆ: ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ) ವಿಜಯಕುಮಾರ್ (ಹೊಸಪೇಟೆ)…

Read More
ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜುಲೈ 24ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ, ಜುಲೈ 16ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ 360 ಕನ್ನಡಕಗಳನ್ನು ವಿತರಿಸಲಾಯಿತು. ವಿತರಣಾ ಕಾರ್ಯಕ್ರಮ ಶ್ರೀರಾಮನಗರದ ಎ.ಕೆ.ಆರ್.ಡಿ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ…

Read More