
ವಸಂತ ಪಂಚಮಿ ಪ್ರಯುಕ್ತ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.
ಗಂಗಾವತಿ. ವಸಂತ ಪಂಚಮಿ ಪ್ರಯುಕ್ತ ಸೋಮವಾರದಂದು ಶೃಂಗೇರಿಯ ಶಾರದಾ ಪೀಠದ ಗಂಗಾವತಿ ಶಂಕರ ಮಠದ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೇತೃತ್ವದಲ್ಲಿ ಜರುಗಿದವು. ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಇವುಗಳ ಜೊತೆಗೆ 14 ಅಧಿಕ ಚಿಕ್ಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅಕ್ಷರ ಅಭ್ಯಾಸವನ್ನು ನೆರವೇರಿಸಲಾಯಿತು. ಜೊತೆಗೆ ವಿವಿಧ ಶಾಲಾ ಕಾಲೇಜುಗಳ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಂಕಲ್ಪವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕುಮಾರ್…