
ತಂಬೂರಿ ಪದ ಗಾಯಕರು ಕೆಬ್ಬೇಪುರದ ಆರ್. ಸಿದ್ಧರಾಜು ಗೊರೂರು ಅನಂತರಾಜು, ಹಾಸನ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್. ಸಿದ್ಧರಾಜು ಅವರು ಪ್ರಸಿದ್ಧ ತಂಬೂರಿ ಪದ ಕಲಾವಿದರಾಗಿದ್ದಾರೆ. ಇವರು ರಾತ್ರಿಯಿಡೀ ತಂಬೂರಿ ನುಡಿಸಿ ಜನಪದ ಕಾವ್ಯಗಳನ್ನು ಹಾಡುವ ಅಪಾರ ಪ್ರತಿಭೆ ಹೊಂದಿರುವ ಕಲಾವಿದರು. ತಂದೆ ದಿವಂಗತ ಕೆ.ಬಿ.ರಾಚಯ್ಯ ಆಕಾಶವಾಣಿಯ ಎ-ಗ್ರೇಡ್ ಜನಪದ ಕಲಾವಿದರಾಗಿದ್ದರು. ಹಾಡುಗಾರಿಕೆಯ ಕಲೆಯನ್ನು ತಂದೆಯಿಂದಲೇ ಇವರು ಸಂಪಾದಿಸಿದ್ದಾರೆ. ಇವರು ಕೂಡ ಆಕಾಶವಾಣಿಯಲ್ಲಿ ಎ-ಗ್ರೇಡ್ ಕಲಾವಿದರಾಗಿದ್ದಾರೆ. ೪೨ ವರ್ಷಗಳಿಂದ ಮೃತರ ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ, ಉತ್ಸವಗಳಲ್ಲಿ ತಂಬೂರಿ ಪದಗಳನ್ನು ಹಾಡಿ ಜನರ ಮನ ಗೆದ್ದಿದ್ದಾರೆ. ಇವರು…